ಕನ್ನಡ ಅಕ್ಷರಮಾಲೆ 'ಅ'ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.
ನಮ್ಮ ಹೊಸ ಲೇಖನಗಳಿಂದ...
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
ಸುಂಡೋಕು ಎಂದರೆ ಓದಲು ಉದ್ದೇಶಿಸಿ ಪುಸ್ತಕಗಳು ಅಥವಾ ಇತರೆ ಓದುವ ಸಾಮಗ್ರಿಗಳನ್ನು ಖರೀದಿಸಿ, ಅವುಗಳನ್ನು ಓದದೆ ಮನೆಯಲ್ಲೇ ರಾಶಿಯಾಗಿ ಸಂಗ್ರಹಿಸುವ ಪ್ರವೃತ್ತಿಯನ್ನು ಸೂಚಿಸುವ ಜಪಾನೀಸ್ ಪದವಾಗಿದೆ. ಮುಂದೆ ಓದಬೇಕೆಂಬ ಉದ್ದೇಶದಿಂದ ಪುಸ್ತಕದ ಕಪಾಟಿನಲ್ಲಿ ಇಟ್ಟುಕೊಂಡಿರುವ ಆದರೆ ಇನ್ನೂ ಓದದ ಪುಸ್ತಕಗಳನ್ನೂ ಈ ಪದದಿಂದ ಸೂಚಿಸಲಾಗುತ್ತದೆ.
ಬಿ.ಆರ್.ಮಾಣಿಕ್ಯಮ್(1909–1964) ಕರ್ನಾಟಕದ ಮೊದಲ ನಗರ ಯೋಜನಾ ನಿರ್ದೇಶಕರಾಗಿ, ರಾಜ್ಯದ ಮೂಲಸೌಕರ್ಯ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಅತ್ಯಂತ ಪ್ರಸಿದ್ಧ ಸಾಧನೆಯೆಂದರೆ ಕರ್ನಾಟಕದ ಶಾಸಕಾಂಗ ಭವನವಾದ ಭವ್ಯವಾದ ವಿಧಾನಸೌಧದ ವಿನ್ಯಾಸ.
ವಂಶವೃಕ್ಷ_(ಕಾದಂಬರಿ) ೧೯೬೫ರಲ್ಲಿ ಬಿಡುಗಡೆಯಾದ ಡಾ. ಎಸ್.ಎಲ್. ಭೈರಪ್ಪನವರ ಕನ್ನಡ ಕಾದಂಬರಿ. ಸಮ���ಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಸಶಕ್ತ ಪಾತ್ರಗಳಿಂದ, ಖ್ಯಾತಿ ಪಡೆದ ಕೃತಿ.
ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ).